ಹೊಸ ಕನ್ನಡ ಕಾದಂಬರಿ · ಈಗ ಲಭ್ಯ

ಗರಿಕೆ

ಮತ್ತೆ ಚಿಗುರುವಾಕೆ

ಮಲೆನಾಡಿನ ಮಂಜಿನಿಂದ ಕರಾವಳಿಯ ಕಠಿಣ ಬದುಕಿನವರೆಗೆ ಸಾಗುವ ಗೌರಿಯ ಪಯಣ. ವಂಚನೆ, ಸಮಾಜದ ಅಣಕ, ತಾಯ್ತನ ಮತ್ತು ಸ್ವಾಭಿಮಾನಗಳ ನಡುವೆ ಗರಿಕೆಯಂತೆ ಮತ್ತೆ ಹಸಿರಾಗುವ ಹೆಣ್ಣಿನ ಕಥೆ.

ಗರಿಕೆ ಪುಸ್ತಕದ ಮುಖಪುಟ
ಲೇಖಕರು: ದೇವಿಪ್ರಸಾದ್ ಶೆಟ್ಟಿ ಹೆಬ್ಬಾಗಿಲುಮನೆ

ಪುಸ್ತಕ ಖರೀದಿ

ನಿಮಗೆ ಅನುಕೂಲವಾದ ಮಳಿಗೆಯಲ್ಲಿ ಗರಿಕೆ ಲಭ್ಯ.

ಕನ್ನಡ ಪುಸ್ತಕ ಹುಡುಕುವ ಓದುಗರಿಗೆ

Kannada books to read ಎಂದು ಹುಡುಕುವ ಓದುಗರಿಗೆ ಗರಿಕೆ.

Kannada books online shopping, Kannada novels to read ಅಥವಾ new Kannada novel ಎಂದು ಹುಡುಕುತ್ತಿರುವ ಓದುಗರಿಗೆ ಗರಿಕೆ ಒಂದು ಭಾವನಾತ್ಮಕ ಕುಟುಂಬ ಕಾದಂಬರಿ. ಮಲೆನಾಡು, ಕರಾವಳಿ ಬದುಕು, ತಾಯ್ತನ, ಅನ್ಯಾಯದ ವಿರುದ್ಧದ ಹೋರಾಟ ಮತ್ತು ಹೆಣ್ಣಿನ ಸ್ವಾಭಿಮಾನ ಈ ಕಥೆಯ ಮುಖ್ಯ ನಾಡಿಗಳು.

ಉತ್ತಮ ಕನ್ನಡ ಪುಸ್ತಕಗಳು, ಕನ್ನಡ ಕಾದಂಬರಿಗಳು, Kannada fiction books ಅಥವಾ best Kannada books for beginners ಎಂಬ ಹುಡುಕಾಟದಲ್ಲಿ ಇರುವವರಿಗೆ ಗೌರಿಯ ಪಯಣ ಸುಲಭವಾಗಿ ಓದಬಹುದಾದರೂ ಮನಸ್ಸಿನಲ್ಲಿ ಉಳಿಯುವ ಕಥೆಯ ಅನುಭವ ನೀಡುತ್ತದೆ.

ಓದಲೇಬೇಕಾದ ಕನ್ನಡ ಪುಸ್ತಕಗಳು, latest Kannada novels ಮತ್ತು emotional Kannada novel ಹುಡುಕುವ ಓದುಗರಿಗೆ ಈ ಪುಸ್ತಕ Amazon India, Flipkart ಮತ್ತು Notion Press ಮೂಲಕ ಲಭ್ಯವಿದೆ.

ಹೆಸರಿನ ಅರ್ಥ

‘ಗರಿಕೆ’ ಎಂಬ ಹೆಸರನ್ನೇ ಏಕೆ ಆರಿಸಿದೆ?

ಬಹಳಷ್ಟು ಜನರಿಗೆ ಕಾದಂಬರಿಗೆ ತೀರಾ ಸಾಮಾನ್ಯವಾದ ‘ಗರಿಕೆ’ ಹುಲ್ಲಿನ ಹೆಸರೇಕೆ ಎಂಬ ಪ್ರಶ್ನೆ ಇರಬಹುದು? ಗುಲಾಬಿಯ ಬಣ್ಣವಾಗಲೀ, ಮಲ್ಲಿಗೆಯ ಕಂಪಾಗಲೀ, ಆಲದ ಮರದ ಗಾಂಭೀರ್ಯವಾಗಲೀ ಇಲ್ಲದ, ಕಾಲಡಿಯಲ್ಲಿ ಸಿಕ್ಕು ಒದ್ದಾಡುವ ಈ ಪುಟ್ಟ ಹುಲ್ಲಿನಲ್ಲಿ ಅಂಥದ್ದೇನಿದೆ?

ನಿಜ. ಗರಿಕೆಗೆ ಯಾವ ಅಹಂಕಾರವೂ ಇಲ್ಲ. ಆದರೆ ಅದಕ್ಕೊಂದು ಮೊಂಡುತನವಿದೆ; ನಾನು ಬದುಕಲೇಬೇಕು ಎನ್ನುವ ಮೊಂಡುತನ.

ಬೇಸಿಗೆಯ ಬಿರುಬಿಸಿಲಿಗೆ ಅದು ಒಣಗಿ ಕಂದು ಬಣ್ಣಕ್ಕೆ ತಿರುಗಿ, ನೆಲದ ಮಣ್ಣಿನೊಂದಿಗೆ ಮಣ್ಣಾಗಿ, ಜೀವವೇ ಇಲ್ಲವೇನೋ ಎಂಬಂತೆ ಮರೆಯಾಗುತ್ತದೆ. ದಾರಿಯಲ್ಲಿ ಹೋಗುವವರು, ಬರುವವರೆಲ್ಲ ಅದರ ಮೇಲೆಯೇ ಕಾಲಿಟ್ಟು ನಡೆಯುತ್ತಾರೆ. ಯಾರ ಗಮನವೂ ಅದರ ಮೇಲಿರುವುದಿಲ್ಲ. ಆದರೆ ಮುಂಗಾರಿನ ಮಳೆಯ ಒಂದೇ ಒಂದು ಹನಿ ಬಿದ್ದರೆ ಸಾಕು, ಎಲ್ಲಿ ಅಡಗಿತ್ತೋ ಅದರ ಜೀವ ಮತ್ತೆ ಹಚ್ಚಹಸಿರಾಗಿ ತಲೆಯೆತ್ತುತ್ತದೆ. ಅದನ್ನು ಎಷ್ಟೇ ತುಳಿಯಿರಿ, ಕತ್ತರಿಸಿ ಬಿಸಾಡಿ, ಅದರ ಚಿಗುರುವ ಕನಸನ್ನ ನಾಶ ಮಾಡುವುದು ಅಸಾಧ್ಯ.

ನಾನು ಈ ಕಥೆಯನ್ನು ಬರೆಯುವಾಗ ನನ್ನ ಕಾಡುತ್ತಿದ್ದದ್ದು ಇದೇ ಬರಿ ಗರಿಕೆ ಅಷ್ಟೇ ಅಲ್ಲ ಮನುಷ್ಯರಲ್ಲೂ ಕೆಲವರು ಹಾಗಿರುತ್ತಾರೆ. ಬದುಕು ಅವರನ್ನು ನಿರ್ದಾಕ್ಷಿಣ್ಯವಾಗಿ ನಡೆಸಿಕೊಂಡರೂ, ಪರಿಸ್ಥಿತಿಗಳು ಉಸಿರುಗಟ್ಟಿಸಿದಾಗಲೂ, ಇನ್ನು ಇವರು ಮುಗಿದೇ ಹೋದರು ಎಂದು ಜಗತ್ತು ತೀರ್ಮಾನಿಸಿದಾಗಲೂ ಅವರು ಒಳಗೆಲ್ಲೋ ಜೀವ ಹಿಡಿದಿಟ್ಟುಕೊಂಡಿರುತ್ತಾರೆ.

ಅವರಲ್ಲಿ ಸೇಡಿನ ಆರ್ಭಟವಿರುವುದಿಲ್ಲ. ಕೂಗಿ ಹೇಳುವ ಆಕ್ರೋಶವಿರುವುದಿಲ್ಲ. ಇರುವುದು ಕೇವಲ ಒಂದು ಮೌನವಾದ, ಮುರಿಯಲಾಗದ ಘನತೆ.

‘ತುಳಿದಷ್ಟು ಚಿಗುರುವಾಕೆ’ ಎಂಬ ಅಡಿಬರಹ ಹೊಳೆದದ್ದು ಆ ಹೊತ್ತಿನಲ್ಲೇ. ಬದುಕಿನ ಬಿರುಗಾಳಿಗಳ ನಡುವೆ, ದೈನಂದಿನ ಸಂಬಂಧಗಳ ತಲ್ಲಣಗಳ ಮಧ್ಯೆ ತನ್ನ ಪಾಡಿಗೆ ತಾನು ಮೌನವಾಗಿ ಸಹಿಸುತ್ತಾ, ಸ್ವಲ್ಪ ಪ್ರೀತಿಯ, ವಿಶ್ವಾಸದ ಹನಿ ಬಿದ್ದರೆ ಸಾಕು ಮತ್ತೆ ಜೀವಂತವಾಗುವ ಒಂದು ಹೆಣ್ಣಿನ ಪಯಣವನ್ನು ಹೇಳಲು ನನಗೆ ಗರಿಕೆಗಿಂತ ಸೂಕ್ತವಾದ ಹೆಸರು ಬೇರೊಂದು ಸಿಗಲಿಲ್ಲ.

ಇಲ್ಲಿ ಬೊಬ್ಬೆ ಹೊಡೆಯುವ ದೊಡ್ಡ ಯುದ್ಧಗಳಿಲ್ಲ. ಇರುವುದು ಕೇವಲ ಬದುಕುವ, ತನ್ನ ಅಸ್ತಿತ್ವವನ್ನು ಉಳಿಸಿಕೊಳ್ಳುವ ಮೌನ ಹೋರಾಟ. ಆ ಹೋರಾಟದ ಕಥೆಯೇ ‘ಗರಿಕೆ’.

ಕಥೆಯ ಬಗ್ಗೆ

ಮೌನದಿಂದ ಹೋರಾಟದವರೆಗೆ ಗೌರಿಯ ಬದುಕು ಮತ್ತೆ ಚಿಗುರುತ್ತದೆ.

ಕುಟುಂಬವನ್ನು ಉಳಿಸಬೇಕೆಂಬ ಹೊಣೆ ಹೊತ್ತು ಕರಾವಳಿಯತ್ತ ಹೆಜ್ಜೆ ಇಡುವ ಗೌರಿಗೆ ಪ್ರೀತಿಯ ಹೆಸರಿನಲ್ಲಿ ವಂಚನೆ, ಸಮಾಜದ ಕಠಿಣ ಮಾತುಗಳು ಮತ್ತು ಬದುಕಿನ ನಿರ್ದಯ ಪರೀಕ್ಷೆಗಳು ಎದುರಾಗುತ್ತವೆ. ಆ ನೋವಿನ ನಡುವೆ ಅವಳು ತನ್ನ ಮಗುವಿನ ಹಕ್ಕು ಮತ್ತು ತನ್ನ ಅಸ್ತಿತ್ವಕ್ಕಾಗಿ ನಿಂತುಕೊಳ್ಳುತ್ತಾಳೆ.

ಹಣದ ಅಹಂಕಾರ, ಅಧಿಕಾರದ ಹಸಿವು ಮತ್ತು ಕಾಲದ ಆಟಗಳ ನಡುವೆ ಸಾಮಾನ್ಯ ಹೆಣ್ಣೊಬ್ಬಳು ಅನ್ನಪೂರ್ಣೆಯ ಮನಸ್ಸು, ಕಾಳಿಯ ಧೈರ್ಯ ಮತ್ತು ಗರಿಕೆಯ ಜೀವಂತಿಕೆಯನ್ನು ಹೊಂದುತ್ತಾಳೆ. ಸಮಾಜದ ಕಹಿ ಸತ್ಯ ಮತ್ತು ತಾಯ್ತನದ ಆಳವಾದ ಶಕ್ತಿಯನ್ನು ಈ ಕಾದಂಬರಿ ಭಾವನಾತ್ಮಕವಾಗಿ ತೆರೆದಿಡುತ್ತದೆ.

ಓದುಗರ ಮಾತು

ಗರಿಕೆಯ ಬಗ್ಗೆ ಹೃದಯದಿಂದ ಬಂದ ಮಾತುಗಳು.

ಪ್ರಾಥಮಿಕ ಶಾಲೆಯ ಗುರುಗಳು · ಬಣ್ಣದ ಗರಿ ನೆನಪು

“ಬಣ್ಣದ ಗರಿಯ ಸಸಿಯೊಂದು ಬೆಳೆದು ಹೂ ಬಿಟ್ಟು ತನ್ನ ಸುಗಂಧವನ್ನು ಹರಡತೊಡಗಿದೆ.”

ಶಾಲಾ ದಿನಗಳಲ್ಲಿ ಬರವಣಿಗೆಯ ಆಸಕ್ತಿಗೆ ಅಡಿಪಾಯ ಹಾಕಿಕೊಟ್ಟ “ಬಣ್ಣದ ಗರಿ” ಮಕ್ಕಳ ತ್ರೈಮಾಸಿಕ ಪತ್ರಿಕೆಯಿಂದ ಆರಂಭವಾದ ಪಯಣ, ಮೊದಲ ಕಾದಂಬರಿಯಾಗಿ ಶಾಲೆಯ ಗ್ರಂಥಾಲಯಕ್ಕೆ ಮರಳಿದ ಕ್ಷಣವನ್ನು ಈ ಅಭಿಪ್ರಾಯ ಆತ್ಮೀಯವಾಗಿ ದಾಖಲಿಸುತ್ತದೆ.

ಪೂರ್ಣ ಅಭಿಪ್ರಾಯ ಓದಿ

ಹೌದು, ಇಂದೇನೋ ಒಂದು ರೀತಿಯ ಸಾರ್ಥಕ ಭಾವ. 13 ವರ್ಷಗಳ ಹಿಂದೆ ಬೈಲೂರಿನ ಶಾಲೆಯಲ್ಲಿ ಆರಂಭಿಸಿದ “ಬಣ್ಣದ ಗರಿ” ಮಕ್ಕಳ ತ್ರೈಮಾಸಿಕ ಪತ್ರಿಕೆಯಿಂದ ಪ್ರೇರಣೆಗೊಂಡು ಬರೆಯುವ ಹವ್ಯಾಸವನ್ನು ರೂಢಿಸಿಕೊಂಡ ಶಿಷ್ಯ ದೇವಿಪ್ರಸಾದ್ ಶೆಟ್ಟಿ ಇಂದು ಶಾಲೆಗೆ ಬಂದು ತನ್ನ ಮೊದಲ ಕಾದಂಬರಿಯನ್ನು ಶಾಲೆಯ ಗ್ರಂಥಾಲಯಕ್ಕೆ ಕೊಡುಗೆಯಾಗಿ ನೀಡಿದಾಗ ತುಂಬಾ ಸಂತೋಷವಾಯಿತು.

ತನ್ನ ಕಾದಂಬರಿಯ ಪೆನ್ನುಡಿಯಲ್ಲಿ “ನಾನು ಬರೆಯಲಾರಂಭಿಸಿದ ಪ್ರತಿಯೊಂದು ಅಕ್ಷರದ ಹಿಂದೆಯೂ ನನ್ನ ಶಾಲಾ ದಿನಗಳ ನೆನಪಿದೆ. ನನ್ನ ಬರವಣಿಗೆಯ ಆಸಕ್ತಿಗೆ ಅಡಿಪಾಯ ಹಾಕಿಕೊಟ್ಟ ಪತ್ರಿಕೆ ’ಬಣ್ಣದ ಗರಿ’ಗೆ ನನ್ನ ಹೃತ್ಪೂರ್ವಕ ಕೃತಜ್ಞತೆಗಳು.” ಎಂಬ ಸಾಲು ಮನಸ್ಸಿಗೆ ತಟ್ಟಿತು. ಮಕ್ಕಳಿಗಾಗಿ ಬಣ್ಣದ ಗರಿಯನ್ನು ಹೊರತಂದದ್ದಕ್ಕೆ ಸಾರ್ಥಕ ಭಾವ ಮೂಡಿತು.

ಇತ್ತೀಚೆಗೆ ಒಂದು ಪುಸ್ತಕವನ್ನೂ ಒಂದೇ ಗುಟುಕಿಗೆ ಓದಿಲ್ಲ. ಆದರೆ ದೇವಿಪ್ರಸಾದನ “ಗರಿಕೆ – ಮತ್ತೆ ಚಿಗುರುವಾಕೆ” ಎಂಬ 125 ಪುಟಗಳ ಸಣ್ಣ ಕಾದಂಬರಿ ಒಂದೇ ಗುಟುಕಿಗೆ ಓದಿಸಿಕೊಂಡು ಹೋಯಿತು.

“ಬೆಟ್ಟದ ಮೇಲಿನ ಹೂವು ದೇವರಿಗೆ, ಕಣಿವೆಯೊಳಗಿನ ಹೂವು ಕಸಕ್ಕೆ. ಆದರೆ ಎರಡೂ ಬಾಡುವುದು ಒಂದೇ ಸೂರ್ಯನ ಕೆಳಗೆ.” ಎಂಬ ಸಾಲಿನೊಂದಿಗೆ ಆರಂಭವಾಗುವ ಕಾದಂಬರಿ, ಕಥಾನಾಯಕಿ ಗೌರಿ ಎಂಬ ಹೆಣ್ಣುಮಗಳು ತನ್ನ ಬಾಳಿನಲ್ಲಿ ಎದುರಿಸಿದ ಕಷ್ಟಗಳಿಗೆ ಎದೆಯೊಡ್ಡಿ ಗರಿಕೆಯಂತೆ ಮತ್ತೆ ಚಿಗುರುವ ಕಥೆಯನ್ನು ಹೇಳುತ್ತದೆ.

ಬಡತನವನ್ನು ಕಂಡು ಬೆಳೆದ ದೇವಿಪ್ರಸಾದನಿಗೆ ಈ ಕಥೆ ಸುಲಭವಾಗಿ ಕೈಹಿಡಿದಿರಬಹುದು. ಮಲೆನಾಡು ಮತ್ತು ಕರಾವಳಿಯ ನಡುವೆ ನಡೆಯುವ ಕಥೆಯಲ್ಲಿ ಸಾಧ್ಯವಾದ ಕಡೆಗಳಲ್ಲಿ ಸನ್ನಿವೇಶಕ್ಕೆ ಪೂರಕವಾಗುವಂತೆ ಪ್ರಕೃತಿಯನ್ನು ವರ್ಣಿಸುತ್ತಾ ಕಾದಂಬರಿಗೆ ಮೆರಗು ಹಚ್ಚುವ ಪ್ರಯತ್ನ ಮಾಡಿದ್ದಾನೆ.

ಕಥೆ ಒಂದಿಷ್ಟು ಸಿನಿಮೀಯವಾಗಿ ಕಂಡರೂ ಹೊಸ ಓದುಗರಿಗೆ ತುಂಬಾ ಇಷ್ಟವಾಗುತ್ತದೆ. ಕೆಲವು ಕಡೆ ಸನ್ನಿವೇಶಕ್ಕೆ ಪೂರಕವಾದ ತಾತ್ವಿಕ ಸಾಲುಗಳು ಮನಸ್ಸಿಗೆ ತಟ್ಟುತ್ತವೆ.

“ಸ್ವಾಭಿಮಾನ ಎಂಬುದು ಬಡವನಿಗೆ ಐಷಾರಾಮಿ ವಸ್ತುವಿದ್ದಂತೆ; ಅದನ್ನು ಉಳಿಸಿಕೊಳ್ಳಲು ಹೋದರೆ ಹೊಟ್ಟೆ ತುಂಬುವುದಿಲ್ಲ.” “ಕಲ್ಲಿನ ದೇವರಿಗೆ ಬಡವನ ಕೂಗು ಕೇಳುವುದೇ ಇಲ್ಲವೇನೋ.” “ಈ ಸಮಾಜ ಹೆಣ್ಣನ್ನು ಶಕ್ತಿ ಎಂದು ಪೂಜಿಸುತ್ತದೆ; ಆದರೆ ಅವಳು ಶಕ್ತಿಯಾಗಿ ನಿಂತಾಗ ಭಯಪಡುತ್ತದೆ. ಅವಳ ಬಾಯಿ ಮುಚ್ಚಿಸುತ್ತದೆ.” ಹೀಗೆ ಅನೇಕ ಸಾಲುಗಳು ಓದುಗರನ್ನು ಚಿಂತನೆಗೆ ಹಚ್ಚುತ್ತವೆ.

ಒಂದು ಕಾದಂಬರಿ ಬರೆಯಬೇಕಾದರೆ ಆಳವಾದ ಓದು ಮತ್ತು ಅಧ್ಯಯನ ಬೇಕಾಗುತ್ತದೆ. ಹಾಗೆ ನೋಡಿದರೆ ದೇವಿಪ್ರಸಾದನದ್ದು ಆರಂಭಿಕ ಹೆಜ್ಜೆಯಷ್ಟೇ. ಹೆಚ್ಚು ಅಧ್ಯಯನ ಮತ್ತು ಓದನ್ನು ತನ್ನದಾಗಿಸಿಕೊಂಡರೆ ಒಬ್ಬ ಉತ್ತಮ ಕಥೆಗಾರ ಹಾಗೂ ಕಾದಂಬರಿಕಾರನಾಗಿ ದೇವಿಪ್ರಸಾದ್ ಬೆಳೆಯುವುದರಲ್ಲಿ ಅನುಮಾನವೇ ಇಲ್ಲ.

Pavithra Pai · Amazon Verified Purchase

“This book feels less like a story and more like an emotion.”

Rated 5.0 out of 5 on Amazon India. Reviewed on 27 May 2026 with the title “even after pain, life still finds a way to rise.”

Read the Amazon review

Keerthana Poojary · LinkedIn

“This isn’t just a novel — it already feels like an emotion.”

Keerthana Poojari shared that the first 10 pages were enough to make her admire the depth behind every line.

Read the LinkedIn post

ಪುಸ್ತಕ ವಿವರಗಳು

ಆವೃತ್ತಿ ಮಾಹಿತಿ

ಶೀರ್ಷಿಕೆ
ಗರಿಕೆ: ಮತ್ತೆ ಚಿಗುರುವಾಕೆ
ಲೇಖಕರು
ದೇವಿಪ್ರಸಾದ್ ಶೆಟ್ಟಿ ಹೆಬ್ಬಾಗಿಲುಮನೆ
ISBN
9798904790196
ರೂಪಗಳು
ಪೇಪರ್‌ಬ್ಯಾಕ್ · ಹಾರ್ಡ್‌ಕವರ್
ವರ್ಗ
Kannada fiction · Emotional family novel · Kannada literature
ಬೆಲೆ
ಪೇಪರ್‌ಬ್ಯಾಕ್ ₹199 · ಹಾರ್ಡ್‌ಕವರ್ ₹349
ಪುಟಗಳು
132
ದೇವಿಪ್ರಸಾದ್ ಶೆಟ್ಟಿ ಹೆಬ್ಬಾಗಿಲುಮನೆ

ಲೇಖಕರು

ದೇವಿಪ್ರಸಾದ್ ಶೆಟ್ಟಿ ಹೆಬ್ಬಾಗಿಲುಮನೆ

ದೇವಿಪ್ರಸಾದ್ ಶೆಟ್ಟಿ ಹೆಬ್ಬಾಗಿಲುಮನೆ ಅವರ ಗರಿಕೆ ಕಾದಂಬರಿ ಮಾನವೀಯತೆ, ಕುಟುಂಬ, ಸಮಾಜದ ಕಹಿ ಮುಖ ಮತ್ತು ತಾಯ್ತನದ ಅಜೇಯ ಶಕ್ತಿಯನ್ನು ಕೇಂದ್ರದಲ್ಲಿಟ್ಟುಕೊಂಡಿದೆ. ಗೌರಿ ಎಂಬ ಪಾತ್ರದ ಮೂಲಕ ನೋವಿನ ಮಣ್ಣಿನಿಂದ ಮತ್ತೆ ಹಸಿರಾಗುವ ಬದುಕಿನ ನಂಬಿಕೆಯನ್ನು ಈ ಕೃತಿ ಹೇಳುತ್ತದೆ.

ಅಶ್ವತ್ ಐತಾಳ್

ಮುಖಪುಟ ವಿನ್ಯಾಸ ಸಹಕಾರ

ಅಶ್ವತ್ ಐತಾಳ್

ಗರಿಕೆ ಪುಸ್ತಕದ ಮುಖಪುಟ ವಿನ್ಯಾಸಕ್ಕೆ ಅಶ್ವತ್ ಐತಾಳ್ ಸಹಕರಿಸಿದ್ದಾರೆ.

@ashwath_aithal